ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಬಗ್ಗೆ

ಸಾಮಾಜಿಕ ಭದ್ರತೆ

 

ಕರ್ನಾಟಕ ಸರ್ಕಾರವು ಅಸಹಾಯಕ, ಅಶಕ್ತ ವ್ಯಕ್ತಿಗಳಿಗಾಗಿ ಹಾಗೂ ನಿರ್ಗತಿಕ ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಅನೇಕ ಸಾಮಾಜಿಕ ಭದ್ರತೆ ಯೋಜನೆಗಳನ್ನು ತಹಶೀಲ್ದಾರರು ತಾಲ್ಲೂಕು ಮಟ್ಟದಲ್ಲಿ ಕಾರ್ಯಗತಗೊಳಿಸುತ್ತಿದ್ದಾರೆ. ಸದರಿ ಯೋಜನೆಯನ್ನು ಉತ್ತಮ ರೀತಿಯಲ್ಲಿ ಜಾರಿಗೆ ತರಲು ಸಾಮಾಜಿಕ ನಿರ್ದೇಶನಾಲಯವು ಸರ್ಕಾರಿ ಆದೇಶ ಸಂಖ್ಯೆ:ಕಂ.ಇ.44 ಎಂಎಸ್ ಟಿ 2007, ದಿನಾಂಕ:-08-05-2007 ರಂತೆ ಅಸ್ತಿತ್ವಕ್ಕೆ ಬಂದಿದೆ.

ನಿರ್ದೇಶನಾಲಯದ ಮುಖ್ಯ ಉದ್ದೇಶ ಸಾಮಾಜಿಕ ಭದ್ತತೆಗಳಿಗೆ ಸಂಬಂಧ ಪಟ್ಟ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕಾಲಕಾಲಕ್ಕೆ ತಕ್ಕಂತೆ ಪರಿಣಾಮಕಾರಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವುದಾಗಿರುತ್ತದೆ. 

 

ಇತಿಹಾಸ

 

1880ನೇ ಇಸವಿಯಲ್ಲಿ ಚಾನ್ಸೆಲರ್ ಆಟೋವನ್ ಬಿಸ್ಮಾರ್ಕ, ಜರ್ಮನಿಯ ದುರ್ಬಲ ಹಾಗೂ ಅಸಹಾಯಕ ಜನತೆಗಾಗಿ ಸಾಮಾಜಿಕ ವಿಮಾ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬೇರೆ ಯೂರೋಪಿಯನ್ ದೇಶಗಳು ತಮ್ಮ ಜನತೆಯ ಏಳಿಗೆಗಾಗಿ ಈ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡವು. ತದನಂತರ ಅಮೇರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ ವೆಲ್ಟ್, ಸಾಮಾಜಿಕ ಭದ್ರತಾ ಕಾನೂನನ್ನು 1935 ನೇ ಇಸವಿಯಲ್ಲಿ , ದೇಶವನ್ನು ಅತ್ಯಂತ ವಿಷಮ ಆರ್ಥಿಕ ಸಂಕಷ್ಟದಿಂದ (ದಿಗ್ರೇಟ್ ಡಿಪ್ರೆಷನ್) ಮಾಡಲು ಜಾರಿಗೆ ತಂದರು.

ಕರ್ನಾಟಕ ರಾಜ್ಯ ಸರ್ಕಾರವು ಅಶಕ್ತ ವೃದ್ಧರ ರಕ್ಷಣೆಗಾಗಿ 1965 ನೇ ಇಸವಿಯಲ್ಲಿ ರೂ. 40/- ರಂತೆ ಮಾಸಿಕ ಪಿಂಚಣಿಯನ್ನು ನೀಡುತ್ತಾ ಬಂದಿದೆ. ಅಲ್ಲದೆ ಅಂಗವಿಕಲರ ಸಾಮಾಜಿಕ ಭದ್ರತೆಗಾಗಿ 1979 ರಲ್ಲಿ ಹಾಗೂ ನಿರ್ಗತಿಕ ವಿಧವೆಯರ ರಕ್ಷಣೆಗಾಗಿ 1984ರಲ್ಲಿ ರೂ.40/-ರಂತೆ ಮಾಸಿಕ ಪಿಂಚಣಿಯನ್ನು ಜಾರಿಗೆ ತಂದಿದೆ.

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ನೆರವಿನೊಂದಿಗೆ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಗಳನ್ನು (ಎನ್ ಎಸ್ ಎ ಪಿ) ಅನುಷ್ಠಾನಗೊಳಿಸಿದೆ. ಈ ಮಹತ್ವದ ಯೋಜನೆಯಡಿ ನಾಲ್ಕು ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಿವ. 

ಯೋಜನೆಯ ಹೆಸರು
1  ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ
2  ರಾಷ್ಟ್ರೀಯ ಕುಟುಂಬ ಸಹಾಯ ಯೋಜನೆ
3  ಅಂಗವಿಕಲ ಯೋಜನೆ
4  ನಿರ್ಗತಿಕ ವಿಧವಾ ವೇತನ ಯೋಜನೆ

 

 

 

 

 

 

ಇದಲ್ಲದೇ ಕರ್ನಾಟಕ ರಾಜ್ಯ ಸರ್ಕಾರವು ಈ ಕೆಳಗಿನ ಯೋಜನೆಗಳನ್ನು ಜಾರಿಗೊಳಿಸಿದೆ. 

ಯೋಜನೆಯ ಹೆಸರು
1  ಸಂಧ್ಯಾ ಸುರಕ್ಷಾ ಯೋಜನೆ
2  ಮನಸ್ವಿನಿ ಯೋಜನೆ
3  ಮೈತ್ರಿ ಯೋಜನೆ
4  ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ಪಿಂಚಣಿ ಯೋಜನೆ 
5  ಆಸಿಡ್ ದಾಳಿ ಸಂತ್ರಸ್ತರಿಗೆ ಪಿಂಚಣಿ ಯೋಜನೆ
6  ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಾಸಿಕ ಪಿಂಚಣಿ ಯೋಜನೆ
7  ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ
8  ಗೋವಾ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಯೋಜನೆ
9  ಮಾಜಿ ದೇವದಾಸಿ ಯೋಜನೆ
10  ಅಂತ್ಯಕ್ರಿಯೆಯ ಯೋಜನೆ
11  ಆದರ್ಶ ವಿವಾಹ ಯೋಜನೆ
12  ರೈತರ ಆತ್ಮಹತ್ಯೆ, ದಾಸ್ತಾನು ನಷ್ಟ, ಆಕಸ್ಮಿಕ ಸಾವು/ಹಾವು ಕಡಿತದ ಸಂದರ್ಭದಲ್ಲಿ ಪರಿಹಾರ ನೀಡಲಾಗುತ್ತದೆ

 

 

 

 

 

 

 

 

 

 

 

 

  ಸ.ನಂ.

 

 

 

 
×
ABOUT DULT ORGANISATIONAL STRUCTURE PROJECTS